Skip to content

ಏಳು ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕನ್ನಡದ ಕಾಟೇರ (Katera) ದರ್ಶನ್ ಅಭಿಮಾನಿಗಳಲ್ಲಿ ಸಡಗರ

    Katera Box Office Collection: ಚಾಲೆಂಜಿಂಗ್ ಸ್ಟಾರ್ ದರ್ಶನ್,  ಅನುರಾಧ ರಾಮ್, ಜಗಪತಿ ಬಾಬು, ಶೃತಿ, ಕುಮಾರ್ ಗೋವಿಂದ್, ಅವಿನಾಶ್, ಮುಂತಾದವರು ನಟಿಸಿರುವ ಕಾಟೇರ ಸಿನಿಮಾವು ಡಿಸೆಂಬರ್ 29ರಂದು ತೆರೆಗೆ ಬಂದಿತ್ತು.

    ಹೋದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಹೊಸ ವರ್ಷದಲ್ಲಿ ಬಂಪರ್ ಬೆಳೆಯನ್ನೇ ತೆಗೆದಿದೆ. ಸಿನಿಮಾ ಬಿಡುಗಡೆಯಾದ 7 ದಿನದಲ್ಲಿ 104.88 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿಕೊಂಡಿದೆ.

    ಇದನ್ನು ಕೂಡ ಓದಿ : ಕಳೆದು ಹೋದ ಪಾನ್ ಕಾರ್ಡ್ ನಂಬರ್ ಹುಡುಕುವುದು ಇಷ್ಟು ಸುಲಭನ!

    ಏಳನೇ ದಿನ ಎಷ್ಟು ಗಳಿಕೆ ಆಯಿತು?

    ಆರು  ದಿನಗಳಲ್ಲಿ 95.36 ಕೋಟಿ ರೂಪಾಯಿಗಳನ್ನು ಗಳಿಸಿತ್ತು ಆದರೆ ಏಳನೇ ದಿನ ಮಾತ್ರ ಕಾಟೇರ ಸಿನಿಮಾ 9.52 ಕೋಟಿಗಳನ್ನು ಗಳಿಸಿದೆ ಅಲ್ಲಿಗೆ ಕಾಟೇರ ಸಿನಿಮಾ ಮೊದಲನೇ ವಾರಕ್ಕೆ ಸರಿಯಾಗಿ ಶತಕೋಟಿ ಕ್ಲಬ್ ಸೇರಿದೆ. ಅಲ್ಲಿಗೆ ಕಾಟೇರ ಸಿನಿಮಾದ ಒಟ್ಟು ಗಳಿಕೆ 104.88 ಕೋಟಿ ರೂಪಾಯಿಗಳನ್ನು ತಲುಪಿದೆ.

    ADVT: Best Discounts on Electronic Products up to 45%

    ಇಲ್ಲಿಯವರೆಗೂ ಆಗಿರುವ ಶೋಗಳು ಎಷ್ಟು?

    ಕಾಟೇರ ಸಿನಿಮಾಗು ಒಂದೇ ವಾರದಲ್ಲಿ 10961 ಪ್ರದರ್ಶನಗಳನ್ನ ಪಡೆದಿದೆ ಇದರಿಂದಾಗಿ ರಾಜ್ಯಾದ್ಯಂತ ದಾಖಲೆ ಪ್ರದರ್ಶನವನ್ನು ಕಂಡಿದೆ ರೂ.10,961 ಪ್ರದರ್ಶನಗಳಲ್ಲಿ ಒಟ್ಟು 6117 ಶೋಗಳು   ಹೌಸ್ ಫುಲ್ ದಾಖಲೆಗಳನ್ನು ಹೊಂದಿದೆ.

    ವಿದೇಶಗಳಲ್ಲೂ ಕೂಡ ಕಾಟೇರ (Katera) ತೆರೆಗೆ 

    ಕಾಟೇರ ಸಿನಿಮಾ ಯಾವುದೇ ಪ್ಯಾನ್ ಇಂಡಿಯಾ ಟ್ಯಾಗನ್ನು ಹೊತ್ತು ಬಂದಿಲ್ಲ ಇದು ಕಂಪ್ಲೀಟ್ ಆಗಿ ಕನ್ನಡದಲ್ಲಿ ತಯಾರು ಆಗಿ ಕನ್ನಡದಲ್ಲಿ ಮಾತ್ರ ತೆರೆ ಕಂಡ ಸಿನಿಮಾ ಈ ಸಿನಿಮಾ ಮೊದಲು ಕರ್ನಾಟಕ ಮತ್ತು ಬೇರೆ ಬೇರೆ ರಾಜ್ಯಗಳ ಒಂದಷ್ಟು ಪರದೆಗಳಲ್ಲಿ ಮಾತ್ರ ತೆರೆಗೆ ಬಂದಿತ್ತು ಆದರೆ ಇದೀಗ ಜನವರಿ 5 ರಿಂದ ಕಾಟೇರನ ಆರ್ಭಟ ವಿದೇಶಗಳಲ್ಲಿ ಕೂಡ ಶುರುವಾಗಲಿದೆ ಅಂದರೆ ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಿ ತೆರೆಗೆ ತರುವುದಕ್ಕೆ ಕಾಟೇರ ಚಿತ್ರ ತಂಡ ಪ್ಲಾನ್ ಮಾಡಿಕೊಳ್ಳುತ್ತಿದೆ.

    ಇದನ್ನು ಕೂಡ ಓದಿ: ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅರ್ಜಿ ಅಹ್ವಾನ ಇಲ್ಲಿದೆ ಸಂಪೂರ್ಣ ಮಾಹಿತಿ

    ಕಾಟಿರ ಸಿನಿಮಾ ವನ್ನು  ಪೈರೇಸಿ ಮಾಡುತ್ತಿದ್ದ ದೇವದುರ್ಗ ತಾಲೂಕಿನ ಗಂಗಾ ನಾಯಕತಾಂಡದ ಆರೋಪಿ ಮೌನೇಶ್ ನನ್ನು ಈಗಾಗಲೇ ರಾಯಚೂರು ಪೊಲೀಸರು ಸೆರೆ ಹಿಡಿದಿದ್ದಾರೆ ಆರೋಪಿಯು ಆನ್ಲೈನ್ ಅಲ್ಲಿ ರುಪಾಯಿ ನಲವತ್ತು ಪಡೆದು ಟೆಲಿಗ್ರಾಂ ಮೂಲಕ ಕಾಟೇರ ಸಿನಿಮಾದ ಲಿಂಕ್ ಅನ್ನು ಕಳುಹಿಸುತ್ತಿದ್ದ ಆರೋಪಿ ಮೌನೇಶ್ ವಿರುದ್ಧ ಕಾಫಿ ರೈಟ್ ಆಕ್ಟ್ 1957 ಹಾಗೂ ಭಾರತೀಯ ದಂಡಸಂಹಿತೆಯ ಕಲಂ 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    KATERA

    ಏನೇ ಅಡೆ-ತಡೆ ಬಂದರು ಒಟ್ಟಿನಲ್ಲಿ ನಮ್ಮ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ ಈಗ ಸದ್ಯಕ್ಕೆ 100 ಕೋಟಿ ಕ್ಲಬ್ ಸೇರಿರುವ ಕಾಟೇರ ಸಿನಿಮಾವು ಈಗ 200 ಕೋಟಿಗಳ ಸೇರಲಿದೆ ಎಂದು ಫ್ಯಾನ್ಸ್ ಗಳು ಕಾಯುತ್ತಿದ್ದಾರೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಹಾಗೂ ತರುಣ್ ಸುಧೀರ್ ಅವರು ಈ ಸಿನಿಮಾಗೆ ನಿರ್ದೇಶನವನ್ನು ಮಾಡಿದ್ದಾರೆ ಮತ್ತು ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ ಅಷ್ಟೇ ಅಲ್ಲದೆ ಸುಧಾಕರ್ ಎಸ್ ರಾಜ್ ಇವರು ಛಾಯಾಗ್ರಹಣ ಮಾಡಿದ್ದಾರೆ.

    ADVT: Best Discounts on Electronic Products up to 45%

    ನಮ್ಮ ಡಿ ಬಾಸ್ ಸಿನಿಮಾ ಅಂದರೆ ಬಾಕ್ಸ್ ಆಫೀಸ್ ಅಲ್ಲಿ 100 ಕೋಟಿಗೆ ಲೆಕ್ಕಾನೆ ಇಲ್ಲ ಸದ್ಯದಲ್ಲಿ 200 ಕೋಟಿಗಳನ್ನ ಗಳಿಸಿ ನಮ್ಮ ಕಾಟೇರ ಸಿನಿಮಾ 200 ಕೋಟಿಗಳ ಕ್ಲಬ್ ಸೇರಲಿ ಎಂದು ಕೇಳಿಕೊಳ್ಳೋಣ 

    Leave a Reply

    Your email address will not be published. Required fields are marked *